ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ರಕ್ಷಿಸಿ ಮತ್ತು ಸಂರಕ್ಷಿಸುವುದು ನಮ್ಮ ಧ್ಯೇಯ
ಕನ್ನಡ ನಾಡು, ಕನ್ನಡ ಭಾಷೆ, ಕನ್ನಡಿಗರ ಹಕ್ಕು ಮತ್ತು ಗೌರವವನ್ನು ಕಾಪಾಡುವ ಹೋರಾಟದಲ್ಲಿ ಶ್ರೀ ಹೆಚ್. ಶಿವರಾಮೇ ಗೌಡ ಅವರು ಸದಾ ಮುಂಚೂಣಿಯಲ್ಲಿ ನಿಂತಿದ್ದಾರೆ. ಅನ್ಯಾಯ, ಅಕ್ರಮ ಮತ್ತು ಆಡಳಿತದ ನಿರ್ಲಕ್ಷ್ಯದ ವಿರುದ್ಧ ಧ್ವನಿ ಎತ್ತುತ್ತಾ, ಜನಸಾಮಾನ್ಯರ ಸಮಸ್ಯೆಗಳಿಗೆ ನ್ಯಾಯ ದೊರಕಿಸುವುದಕ್ಕಾಗಿ ಹೋರಾಟ, ಪ್ರತಿಭಟನೆ, ಮನವಿ ಪತ್ರ ಸಲ್ಲಿಕೆ ಮತ್ತು ಜನಾಂದೋಲನಗಳನ್ನು ಅವರು ನಿರಂತರವಾಗಿ ನಡೆಸಿಕೊಂಡು ಬಂದಿದ್ದಾರೆ. ಅಧಿಕಾರಿಗಳೊಂದಿಗೆ ನೇರ ಸಂವಾದ, ಸರ್ಕಾರದ ಗಮನ ಸೆಳೆಯುವ ಹೋರಾಟಗಳು ಮತ್ತು ಜನರ ಪರ ನಿಲ್ಲುವ ಧೈರ್ಯವೇ ಅವರ ಹೋರಾಟದ ಶಕ್ತಿ.
ಕನ್ನಡದ ನೆಲ, ಜಲ, ಭಾಷೆ ಮತ್ತು ಸಂಸ್ಕೃತಿಯ ರಕ್ಷಣೆಯೇ ಅವರ ಜೀವನದ ಧ್ಯೇಯವಾಗಿದೆ. ಯಾವುದೇ ಕಾರಣಕ್ಕೂ ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆಯಾಗಬಾರದು ಎಂಬ ದೃಢ ನಿಲುವಿನೊಂದಿಗೆ ಅವರು ಹೋರಾಟ ನಡೆಸಿದ್ದಾರೆ. ಅನೇಕ ಸಂದರ್ಭಗಳಲ್ಲಿ ಕಷ್ಟ, ಟೀಕೆ, ಒತ್ತಡಗಳ ನಡುವೆಯೂ ಹಿಂದೆ ಸರಿಯದೇ, ನ್ಯಾಯಕ್ಕಾಗಿ ಹೋರಾಟ ಮುಂದುವರೆಸಿದ ಅವರ ನಿಲುವು ಸಾವಿರಾರು ಕನ್ನಡಿಗರಿಗೆ ಪ್ರೇರಣೆಯಾಗಿದೆ. ಈ ಹೋರಾಟಗಳು ಕೇವಲ ವ್ಯಕ್ತಿಗತವಲ್ಲ, ಅದು ಸಂಪೂರ್ಣ ಕನ್ನಡ ನಾಡಿನ ಗೌರವಕ್ಕಾಗಿ ನಡೆದ ಹೋರಾಟವಾಗಿದೆ.